ಚಿಕ್ಕಬಳ್ಳಾಪುರ: ಮದ್ಯದ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದ ಟೆಂಪೋ ಒಂದು ಪಲ್ಟಿ ಹೊಡೆದ ಸುಮಾರು 10 ಲಕ್ಷ ಮೌಲ್ಯದ ಮದ್ಯೆ ನಡುರಸ್ತೆಯಲ್ಲಿ ಹೊಳೆಯಂತೆ ಹರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಕಣಿವೆಯ ಬಳಿ ನಡೆದಿದೆ.
ಟೆಂಪೋನಲ್ಲಿ ಚಿಕ್ಕಬಳ್ಳಾಪುರದಿಂದ ಮಂಚೇನಹಳ್ಳಿಗೆ ಮದ್ಯ ಸಾಗಿಸಲಾಗುತ್ತಿತ್ತು. ಈ ವೇಳೆ, ವಾಹನ ಪಲ್ಟಿಯಾಗಿ ಮದ್ಯದ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದವು.ಇನ್ನು ಬಾಟಲಿಗಳು ಒಡೆದು ರಸ್ತೆಯಲ್ಲಿ ಮದ್ಯದ ಹೊಳೆಯೇ ಹರಿಯಿತು. ಇನ್ನು ಒಡೆಯದೇ ಬಿದ್ದಿದ್ದ ಮದ್ಯದ ಬಾಟಲಿಗಳನ್ನು ಜನ ಚೀಲದಲ್ಲಿ ತುಂಬಿಸಿಕೊಂಡರು.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಟೆಂಪೋದಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಿ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.
PublicNext
16/02/2021 07:42 am