ತಂಜಾವೂರು: ಮನೆಯ ಮೇಲ್ಚಾವಣಿಯ ಮೂಲಕ ಒಳ ನುಗ್ಗಿದ ಕೋತಿಯೊಂದು ಮಲಗಿದ್ದ ಎಂಟು ತಿಂಗಳ ಶಿಶುವನ್ನು ಕದ್ದೋಯ್ದ ಭಯಾನಕ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ಮಗು ಅಳುವ ಶಬ್ದ ಕೇಳುತ್ತಿದ್ದಂತೆಯೇ ಮಗುವಿನ ಅಮ್ಮ ಭುವನೇಶ್ವರಿ ಅವರು ಬರುವಷ್ಟರಲ್ಲಿ ಮಗುವನ್ನು ಎತ್ತಿಕೊಂಡು ಮಂಗ ಹಾರಿ ಹೋಗಿದೆ. ಇದರಿಂದ ಭಯಭೀತರಾದ ಭುವನೇಶ್ವರಿಯವರು ಜೋರಾಗಿ ಕಿರುಚಿ, ಸಹಾಯಕ್ಕಾಗಿ ಅಂಗಲಾಚಿದರು.
ಅಕ್ಕಪಕ್ಕದವರೆಲ್ಲರೂ ಬಂದು ಮಂಗವನ್ನು ಓಡಿಸಿದ್ದಾರೆ. ಚೀರಾಟಕ್ಕೆ ಹೆದರಿದ ಮಂಗ ಮಗುವನ್ನು ಮೇಲಿನಿಂದ ಎಸೆದು ಬಿಟ್ಟಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಇನ್ನು ಈ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ವರದಿಯಾಗಿತ್ತು. ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ಕದ್ದೊಯ್ದಿರುವ ಘಟನೆಗಳೂ ಆಗಾಗ್ಗೆ ನಡೆಯುತ್ತಿವೆ. ಆದರೆ ಇದೀಗ ಮಗುವನ್ನು ಹೊತ್ತೊಯ್ದಿರುವುದು ಘಟನೆ ಜನರಲ್ಲಿ ಆತಂಕ ಸೃಷ್ಟಿಸಿದೆ.
PublicNext
14/02/2021 01:23 pm