ಹರಿಯಾಣದ ರೋಹ್ಟಕ್ ನಲ್ಲಿ ಬಿಜೆಪಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬೆಲೂನ್ ಸ್ಫೋಟಗೊಂಡು ಆರು ಮಂದಿ ಗಾಯಗೊಂಡಿದ್ದಾರೆ. ನೈಟ್ರೋಜನ್ ತುಂಬಿದ ಬೆಲೂನ್ ಸ್ಫೋಟ ಗೊಳ್ಳುತ್ತಿದ್ದಂತೆಯೇ ಮಾಜಿ ಸಚಿವ ಮನೀಶ್ ಗ್ರೋವರ್, ಸಂಸದ ಅರವಿಂದ ಶರ್ಮಾ ಅವರ ಪತ್ನಿ ಮತ್ತು ಪುತ್ರಿ ಸೇರಿದಂತೆ 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ಬಿಜೆಪಿ ಮುಖಂಡರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
PublicNext
07/02/2021 03:27 pm