ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಕಿಯಿಂದ ಬೆಳೆ ಉಳಿಸಲು ಹೋದ ರೈತ ಬೆಂದ ಹೋದ!

ಚಾಮರಾಜನಗರ: ಅನ್ನದಾತ ಎಷ್ಟೊಂದು ತ್ಯಾಗಮಯಿ ಅಂದ್ರೆ ಅವನು ಯಾವತ್ತು ಸ್ವಾರ್ಥಿಯಾಗಿ ವಿಚಾರ ಮಾಡುವುದಿಲ್ಲ..ಇದಕ್ಕೆ ಹಸಿ ಸಾಕ್ಷಿ ಎನ್ನುವಂತೆ ಇಲ್ಲೊಬ್ಬ ರೈತ ಪಕ್ಕದ ಹೊಲದ ಬೆಂಕಿ ನಂದಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಹೌದು ಪಕ್ಕದ ಜಮೀನಿನಲ್ಲಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ತಮ್ಮ ಜಮೀನಿಗೂ ವ್ಯಾಪಿಸಬಹುದೆಂಬ ಆತಂಕದಿಂದ ನಂದಿಸಲು ಹೋದ ರೈತರೊಬ್ಬರು ಅಗ್ನಿಯ ಕೆನ್ನಾಲಿಗೆಗೆ ಸಿಲುಕಿ ಬೆಂದು ಹೋಗಿದ್ದಾರೆ.

ಹೌದು ತಾಲೂಕಿನ ಅಮಚವಾಡಿ ಗ್ರಾಮದ ಮಹದೇವನಾಯಕ (63) ಮೃತಪಟ್ಟವರು. ಸೋಮವಾರ ಸಂಜೆ ಮಹದೇವನಾಯಕ ಅವರ ಪಕ್ಕದ ಜಮೀನಿನಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕಲಾಗಿತ್ತು. ಈ ವೇಳೆ ಕಾವಲು ಕಾಯುತ್ತಿದ್ದ ಮಹದೇವನಾಯಕ ಅವರು ಹೊತ್ತಿ ಉರಿಯುತ್ತಿದ್ದ ಬೆಂಕಿ ತಮ್ಮ ಜಮೀನಿಗೆ ಹರಡದಂತೆ ತಡೆಯಲು ಮುಂದಾಗಿದ್ದಾರೆ. ಬೆಂಕಿಯ ಜ್ವಾಲೆ ಮಹದೇವನಾಯಕ ಅವರಿಗೂ ಬಡಿದಿದೆ. ಇದರಿಂದ ತಪ್ಪಿಸಿಕೊಳ್ಳಲು ಆಗದೆ ಗಾಯಗೊಂಡು ಮೂರ್ಛೆ ಹೋಗಿ ಕುಸಿದುಬಿದ್ದಿದ್ದಾರೆ. ಈ ವೇಳೆ ಬೆಂಕಿ ವ್ಯಾಪಿಸಿ ತೀವ್ರ ಸುಟ್ಟಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ರಾತ್ರಿಯಾದರೂ ಮಹದೇವನಾಯಕ ಮನೆಗೆ ಬಾರದಿದ್ದಕ್ಕೆ ಆತಂಕಗೊಂಡ ಮನೆಯವರು ಜಮೀನಿಗೆ ತೆರಳಿದಾಗ ಮಹದೇವನಾಯಕ ಸುಟ್ಟ ಗಾಯಗಳಿಂದ ನರಳುವುದನ್ನು ಕಂಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು ಪ್ರಯೋಜನವಾಗಿಲ್ಲ.

Edited By : Nirmala Aralikatti
PublicNext

PublicNext

02/02/2021 07:31 pm

Cinque Terre

128.8 K

Cinque Terre

2

ಸಂಬಂಧಿತ ಸುದ್ದಿ