ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಲೆಟಿನ್ ಕಡ್ಡಿ ಸ್ಫೋಟ ; ತುಮಕೂರಿನಲ್ಲಿ ಮನೆ ಧ್ವಂಸ

ತುಮಕೂರು: ಶಿವಮೊಗ್ಗದ ಹುಣಸೋಡು ದುರಂತ ಮಾಸುವ ಮುನ್ನವೇ ತುಮಕೂರು ಜಿಲ್ಲೆಯ ಮಸ್ಕಲ್ ಗ್ರಾಮದಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟ ಗೊಂಡಿದ್ದು, ಮನೆಯೊಂದು ಧ್ವಂಸಗೊಂಡಿದೆ.

ತುಮಕೂರಿನ ಹೊನ್ನುಡುಕೆ ಸಮೀಪ ಮಸ್ಕಲ್ ಗ್ರಾಮದಲ್ಲಿ ನಡೆದ ಸ್ಫೋಟದ ಘಟನೆಯಲ್ಲಿ ಮನೆಯು ಸಂಪೂರ್ಣ ನಾಶವಾಗಿದ್ದು ಅದೃಷ್ಟವಶಾತ್ ಯಾವ ಪ್ರಾಣಹಾನಿ ಸಂಭವಿಸಿಲ್ಲ.ಲಕ್ಷ್ಮಿಕಾಂತ್ ಎನ್ನುವವರಿಗೆ ಸೇರಿದ ಮನೆ ಇದಾಗಿದ್ದು ಸ್ಫೋಟದ ಪರಿಣಾಮ ಗೋಡೆಗಳು ಉರುಳಿದೆ. ಘಟನಾ ವೇಳೆ ಮನೆಯಲ್ಲಿದ್ದ ಲಕ್ಷ್ಮಿಕಾಂತ್ ಪತ್ನಿ ಸುವರ್ಣಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪತಿ ಲಕ್ಷ್ಮಿಕಾಂತ್ ಮಕ್ಕಳನ್ನು ಶಾಲೆಗೆ ಬಿಡಲು ತೆರಳಿದ್ದ ವೇಳೆ ಘಟನೆ ನಡೆದಿದ್ದು ಭಾರೀ ಅನಾಹುತ ತಪ್ಪಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮೀಕಾಂತ್ ಅವರು ಕಲ್ಲು ಬಂಡೆಗಳ ಸ್ಫೋಟ, ಮಣ್ಣು ಅಗೆತ ದಂತಹಾ ಕೆಲಸಕ್ಕೆ ನೆರವಾಗುತ್ತಿದ್ದರು. ಮಸ್ಕಲ್ ಗ್ರಾಮದ ಶಾಲೆಯ ಸಮೀಪ ಬಂಡೆಗಳ ಒಡೆಯಲು ಜಿಲೆಟಿನ್ ಕಡ್ಡಿಗಳನ್ನು ತರಿಸಿದ್ದು ಇದರಲ್ಲಿ ಉಳಿದವನ್ನು ಲಕ್ಷ್ಮಿಕಾಂತ್ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರೆಂದು ಹೇಳಲಾಗಿದೆ.

ಸದ್ಯ ಬಾಂಬ್ ನಿಷ್ಕ್ರಿಯ ದಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮನೆಯ ಸುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ಜನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

Edited By : Nirmala Aralikatti
PublicNext

PublicNext

02/02/2021 01:14 pm

Cinque Terre

63.54 K

Cinque Terre

1

ಸಂಬಂಧಿತ ಸುದ್ದಿ