ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿತ, ಅವಶೇಷಗಳಡಿ 8 ಜನ ಸಿಲುಕಿರುವ ಶಂಕೆ

ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಪಟ್ಟಣದ ವಾಣಿಜ್ಯ ಸಂಕೀರ್ಣ ಕುಸಿತ ಪರಿಣಾಮ ಅವಶೇಷಗಳಡಿ 8 ಮಂದಿ ಸಿಲುಕಿರುವ ಶಂಕಿಸಲಾಗಿದೆ. ಒಂದು ಅಂತಸ್ತಿನ ಗೋದಾಮು ಬೆಳಗ್ಗೆ ಕುಸಿದು ಬಿದ್ದಿದೆ, ಎಂದು ಭಿವಾಂಜಿ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಸಂತೋಷ್ ಕದಮ್ ಹೇಳಿದ್ದಾರೆ.

ಗೋಡೌನ್ ನಲ್ಲಿ ಕೆಲಸ ಮಾಡುವ ಕನಿಷ್ಠ ಏಳು ರಿಂದ ಎಂಟು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಆತಂಕ ವ್ಯಕ್ತ ಪಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ಅಗ್ನಿ ಶಾಮಕ ಮತ್ತು ವಿಪತ್ತ ನಿರ್ವಹಣಾ ಸಿಬ್ಬಂದಿ ಆಗಮಿಸಿದ್ದು. ಅವಶೇಷ ತೆರವುಗೊಳಿಸಲು ಮುಂದಾಗಿದ್ದಾರೆ.

Edited By : Nirmala Aralikatti
PublicNext

PublicNext

01/02/2021 04:55 pm

Cinque Terre

62.81 K

Cinque Terre

1

ಸಂಬಂಧಿತ ಸುದ್ದಿ