ಮುಂಬೈ: ಕೋವಿಡ್ -19 ಸೋಂಕಿಗೆ ಮದ್ದು ತಯಾರಿಸುವ ಸಂಸ್ಥೆಯಲ್ಲಿ ಅಗ್ನಿ ಅವಘಡ ಸಂಭವಿಸಿ 5 ಮಂದಿ ಅಸುನಿಗಿದ್ದಾರೆ .
ಸಮಯೋಚಿತ ನಿರ್ಧಾರದಿಂದಾಗಿ ಈ ದುರಂತದಿಂದ 200ಕ್ಕೂ ಹೆಚ್ಚು ಮಂದಿ ಬದುಕುಳಿದಿದ್ದಾರೆ.
ಬೆಂಕಿ ದುರಂತ ಘಟನೆ ಅನುಭವಕ್ಕೆ ಬರುತ್ತಿದ್ದಂತೆ 200ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡದಿಂದ ಹೊರಗೆ ಓಡಲು ಆರಂಭಿಸಿದರು. ಬೆಂಕಿ ಕೆನ್ನಾಲಿ ಕಟ್ಟಡ ತುಂಬ ಆವರಿಸಿಕೊಳ್ಳುತ್ತಿದ್ದಂತೆ ಕೆಲವರಿಗೆ ಓಡಿಹೋಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ನಾವು ಹೊರಗೆ ಹೋಗುವ ಕಡೆಯಲ್ಲಿ ದಟ್ಟ ಹೊಗೆ ತುಂಬಿಕೊಂಡಿತ್ತು. ನಮಗೆ ಏನೂ ಕಾಣಿಸುತ್ತಿರಲಿಲ್ಲ, ನಾವು ಕಿಟಕಿಯ ಬಳಿಗೆ ಹೋಗಿ ಕಟ್ಟಡದ ಮೇಲಿಂದ ಕೆಳಗೆ ಜಿಗಿದೆವು. ಹೇಗೊ ನಾವು ಬಚಾವ್ ಆಗಿ ಹೊರಗೆ ಬಂದರೆ ಸಾಧ್ಯವಾಗದವರು ಸಿಕ್ಕಿ ಅಸುನೀಗಿದರು. ಆ ಸಂದರ್ಭದಲ್ಲಿ ಸಮಯೋಚಿತ ತಕ್ಷಣ ನಿರ್ಧಾರ ಮುಖ್ಯವಾಗಿತ್ತು ಎಂದು ಕಾರ್ಮಿಕರೊಬ್ಬರು ಹೇಳುತ್ತಾರೆ.
ನಿನ್ನೆ ಮೃತಪಟ್ಟ ಐವರು ಕಾರ್ಮಿಕರಲ್ಲಿ ತಲಾ ಇಬ್ಬರು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಮೂಲದವರಾಗಿದ್ದು ಒಬ್ಬರು ಬಿಹಾರದವರಾಗಿದ್ದಾರೆ. ಅವರನ್ನು ರಾಮ ಶಂಕರ್ ಹರಿಜನ್, ಬಿಪಿನ್ ಸರೋಜ್ ಸುಶಿಲ್ ಕುಮಾರ್ ಪಾಂಡೆ, ಮಹೇಂದ್ರ ಇಂಗಲ್, ಪ್ರತೀಕ್ ಪಶ್ಟೆ ಎಂದು ಗುರುತಿಸಲಾಗಿದೆ.
ಎಲ್ಲರೂ ಗುತ್ತಿಗೆ ಕಾರ್ಮಿಕರಾಗಿದ್ದು ಕಟ್ಟಡದಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಬೆಂಕಿ ಸ್ಫೋಟಗೊಂಡಿದೆ.
ಘಟನಾ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಭೇಟಿ ನೀಡಿದ್ದಾರೆ.
ತಲಾ 25 ಲಕ್ಷ ರೂ ಪರಿಹಾರ: ಮೃತರ ಕುಟುಂಬಕ್ಕೆ ಸೆರಂ ಇನ್ಸ್ ಟಿಟ್ಯೂಟ್ ತಲಾ 25 ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದೆ. ಕುಟುಂಬಸ್ಥರಿಗೆ ಅಗತ್ಯ ನೆರವು ನೀಡುವುದಾಗಿಯೂ ತಿಳಿಸಿದೆ.
PublicNext
22/01/2021 09:22 am