ಜಲಪಾಯ್ ಗುಡಿ: ಪಶ್ಚಿಮ ಬಂಗಾಳದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಸಾವನ್ನಪ್ಪಿ 18 ಮಂದಿ ಗಾಯಗೊಂಡಿದ್ದಾರೆ. ದಟ್ಟ ಮಂಜಿನಿಂದಾಗಿ ಈ ಅಪಘಾತ ಸಂಭವಿಸಿದೆ.
ಪಶ್ಚಿಮ ಬಂಗಾಳದ ಜಲಪಾಯ್ಗುಡಿ ಜಿಲ್ಲೆಯ ಧೂಪ್ ಗುರಿ ನಗರದಲ್ಲಿ ಅವಘಡ ಸಂಭವಿಸಿದೆ. ವಾಹನವೊಂದು ನಿಯಂತ್ರಣ ಕಳೆದುಕೊಂಡು ಟ್ರಕ್ ಗೆ ಮುಖಾಮುಖಿ ಢಿಕ್ಕಿ ಹೊಡೆದು ವಿಭಜಕದ ಬಲ ಬದಿಗೆ ಸರಿದಿತ್ತು.
ಈ ಸಂದರ್ಭದಲ್ಲಿ ಎದುರಿನಿಂದ ಬಂದ ಎರಡು ವಾಹನಗಳು ಬಂಡೆಕಲ್ಲು ಹೊತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಸಂದರ್ಭ ಟ್ರಕ್ ವಾಹನದ ಮೇಲೆ ಮಗುಚಿದೆ. ಎಲ್ಲ ನಾಲ್ಕು ವಾಹನಗಳು ನಜ್ಜುಗುಜ್ಜಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಘಟನೆಗೆ ಸಂತಾಪ ಸೂಚಿಸಿರುವ ಪ್ರಧಾನಿ, ಪಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಧನ ಸಹಾಯ ಘೋಷಿಸಿದ್ದಾರೆ.
PublicNext
20/01/2021 03:17 pm