ಕೆಲವರಿಗೆ ಬೈಕ್ ರೈಡ್ ಮಾಡುವಾಗ, ನಡೆದು ಸಾಗುವಾಗ ಹೆಡ್‌ಫೋನ್ ಧರಿಸುವುದು ಒಂದು ಕ್ರೇಜ್. ಹಾಡು ಕೇಳುತ್ತಾ ಹೆಜ್ಜೆ ಹಾಕುವ ಬಯಕೆ. ಇಂತಹ ವಿಚಿತ್ರ ರೂಢಿಗಳಿಗೆ ಬಿದ್ದು ಅನೇಕರು ಅಪಘಾತಕ್ಕೆ ತುತ್ತಾದ ಬಗ್ಗೆ ಕೇಳಿದ್ದೇವೆ, ಕಣ್ಣಾರೆ ಕಂಡಿದ್ದೇವೆ. ಇಂತಹದ್ದೇ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಹೋಶಂಗಾಬಾದ್ನಲ್ಲಿ ಈ ಘಟನೆ ನಡೆದಿದೆ. ಆರೋಗ್ಯ ಕಾರ್ಯಕರ್ತೆಯೊಬ್ಬರು ಕಿವಿಯಲ್ಲಿ ಹೆಡ್ಪೋನ್ ಹಾಕಿಕೊಂಡು ರೈಲು ಹಳಿ ದಾಟುತ್ತಿದ್ದರು. ರೈಲು ಬರುತ್ತಿರುವುದು ಗಮನಿಸದ ಅವರು ಹಾಡಿನ ಗುಂಗಿನಲ್ಲೇ ರೈಲು ಹಳಿ ದಾಟಲು ಮುಂದಾಗಿದ್ದಾರೆ. ಪರಿಣಾಮ ಸೂಪರ್ ಫಾಸ್ಟ್ ರೈಲು ಬಂದಿದ್ದು ಅವರಿಗೆ ತಿಳಿಯಲ್ಲಿ. ರೈಲು ಅವರ ಮೇಲೆ ಹರಿದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನಾದರೂ ಹೆಡ್‌ಫೋನ್ ಹಾಕಿಕೊಂಡು ಪ್ರಯಾಣಿಸುವುನ್ನು ಬಿಡಬೇಕು ಎಂದು ನೆಟ್ಟಿಗರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
PublicNext
18/01/2021 03:54 pm