ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭುವನೇಶ್ವರ್: ಸೆಲ್ಪಿ ಗೀಳು ನೋಡು ನೋಡುತ್ತಿದ್ದಂತೆ ಕೊಚ್ಚಿಹೋದ ಯುವತಿ : ವಿಡಿಯೋ ವೈರಲ್ !

ಭುವನೇಶ್ವರ್: ಇತ್ತೀಚೆಗೆ ಚಿಕ್ಕವರಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಸೆಲ್ಪಿ ಹುಚ್ಚು ತುಸು ಹೆಚ್ಚು.ಸ್ಮಾರ್ಟ್ ಪೋನ್ ಹಿಡಿದವರೇ ಚಕ್ಕನೇ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ.

ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿಗೆ ಪೋಸ್ ನೀಡುವ ಮುನ್ನ ತಾವು ನಿಂತ ಸ್ಥಳ ಎಷ್ಟು ಸೇಫ್ ಎಂಬುದನ್ನು ಮರೆದು ಪೋಸ್ ಕೊಡುವುದರಲ್ಲಿ ತಲ್ಲಿನಿರಾಗಿರುತ್ತಾರೆ.ಸದ್ಯ ಒಡಿಶಾದಲ್ಲಿ ನಡೆದ ಈ ಒಂದು ಘಟನೆ ಸೆಲ್ಪಿ ಎಂದ್ರೆ ಮೈ ನಡುಕ ಬರುವಂತಿದೆ.

ಸೆಲ್ಫಿ ತೆಗೆದುಕೊಳ್ಳಲು ಹೋದ ಯುವತಿಯೊಬ್ಬಳು ಕಾಲು ಜಾರಿ ನದಿಗೆ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ಒಡಿಶಾದಲ್ಲಿ ಜನವರಿ 10ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಒಡಿಶಾದ ಸುಂದರಗಢ್ ಜಿಲ್ಲೆಯಲ್ಲಿರುವ ಕನಕುಂದಾದ ನದಿಯಲ್ಲಿ ಘಟನೆ ನಡೆದಿದ್ದು, ಮೃತ ಯುವತಿಯನ್ನು ನಿರುಪಮಾ ಪ್ರಜಾಪತಿ ಎಂದು ಗುರುತಿಸಲಾಗಿದೆ.ನದಿಯಲ್ಲಿ ಕೊಚ್ಚಿ ಹೋದ ಯುವತಿ ಕೊನೆಗೆ ನದಿಯ ಜಲಪಾತದ ಕೆಳಗೆ ಶವವಾಗಿ ಪತ್ತೆಯಾಗಿದಳು.

ನಿರುಪಮಾ ವೇಗವಾಗಿ ಹರಿಯುವ ನದಿಯ ಪಕ್ಕದಲ್ಲಿನ ಬಂಡೆ ಮೇಲೆ ನಿಂತು ಸೆಲ್ಫಿಗೆ ಪೋಸ್ ನೀಡುವಾಗ ಪಕ್ಕದಲ್ಲಿ ಇದ್ದ ವ್ಯಕ್ತಿಯೊಬ್ಬ ಕಾಲು ಜಾರಿ ಕೆಳಗೆ ಬೀಳುತ್ತಾನೆ. ಬೀಳುವಾಗ ನಿರುಪಮಾಳಿಗೂ ಆನತ ದೇಹ ತಾಗುತ್ತದೆ ಇದರಿಂದ ಸಮತೋಲನ ಕಳೆದುಕೊಳ್ಳುವ ಆಕೆ ಬಂಡೆಯಿಂದ ಜಾರಿ ನೀರಿನ ಒಳಗೆ ಬೀಳುತ್ತಾಳೆ. ಇದನ್ನೂ ನೋಡಿದ ಮತ್ತೊಬ್ಬ ಯುವತಿ ಜೋರಾಗಿ ಕಿರುಚಿಕೊಳ್ಳುತ್ತಾಳೆ. ಆದರೆ, ನೀರಿನ ಹರಿವು ಹೆಚ್ಚಾಗಿದ್ದರಿಂದ ನಿರುಪಮಾ ಕೊಚ್ಚಿ ಹೋಗುತ್ತಾಳೆ.

ಬೀಳುವಾಗ ಏನಾದರೂ ಹಿಡಿದುಕೊಳ್ಳಲು ಅನುಪಮಾ ಪ್ರಯತ್ನಪಟ್ಟರು ಸಹ ಸಾಧ್ಯವಾಗಲಿಲ್ಲ. ಘಟನೆ ಕಣ್ಣು ಮಿಟುಕಿಸುವುದರಲ್ಲಿ ನಡೆದಿದ್ದರಿಂದ ಸ್ಥಳದಲ್ಲಿದ್ದ ಇತರರು ಸಹ ಆಕೆಯ ರಕ್ಷಣೆಯನ್ನು ಮಾಡಲು ಸಾಧ್ಯವಾಗಲಿಲ್ಲ.

ಅಗ್ನಿಶಾಮಕ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿ ಜಲಪಾತದ ಕೆಳಗೆ ಬಂಡೆಯೊಂದಕ್ಕೆ ಸಿಲುಕಿಕೊಂಡಿದ್ದ ಸ್ಥಿತಿಯಲ್ಲಿ ನಿರುಪಮಾ ಶವ ಪತ್ತೆಯಾಗಿದೆ. ಹಾಗಾಗಿ ಸೆಲ್ಪಿ ತೆಗೆದುಕೊಳ್ಳುವ ಮುಂಚೆ ನಿಂತ ಜಾಗವನ್ನು ಮರೆಯದಿರಿ… ಜೋಕೆ..

Edited By : Manjunath H D
PublicNext

PublicNext

17/01/2021 01:24 pm

Cinque Terre

141.94 K

Cinque Terre

11