ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸ್ ಗೆ ವಿದ್ಯುತ್ ತಂತಿ ಸ್ಪರ್ಶ: ಆರು ಜನ ಸಜೀವ ದಹನ, 19 ಜನರಿಗೆ ಗಾಯ

ಜಲೋರ್ ( ರಾಜಸ್ಥಾನ) : ಖಾಸಗಿ ಬಸ್ ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಕಾಣಿಸಿಕೊಂಡು ಆರು ಮಂದಿ ಪ್ರಯಾಣಿಕರು ಸಾವನ್ನಪ್ಪಿ 19 ಜನರು ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ರಾಜಸ್ಥಾನದ ಜಲೋರ್ ನಲ್ಲಿ ನಡೆದಿದೆ.

ಈ ಖಾಸಗಿ ಬಸ್ ಮಂದೋರ್ ನಿಂದ ಬೀವರ್ ಗೆ ಚಲಿಸುತ್ತಿತ್ತು. ಆದರೆ ಬಸ್ ಚಾಲಕ ತಪ್ಪಾಗಿ ಮಹೇಶ್ ಪುರ ಗ್ರಾಮದ ಕಡೆಗೆ ಬಸ್ ಚಲಾಯಿಸಿದ್ದ. ಈ ವೇಳೆ ಬಸ್ ಗೆ ವಿದ್ಯುತ್ ತಂತಿಯ ಸ್ಪರ್ಷವಾಗಿದ್ದು, ಬಸ್ ಗೆ ಬೆಂಕಿ ಹತ್ತಿಕೊಂಡಿದೆ.

ಘಟನೆಯಲ್ಲಿ ಆರು ಮಂದಿ ಸಜೀವ ದಹನವಾಗಿದ್ದು, 19 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೋಧಪುರ ಮತ್ತು ಜಲೋರ್ ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nirmala Aralikatti
PublicNext

PublicNext

17/01/2021 10:05 am

Cinque Terre

77.79 K

Cinque Terre

0