ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಸ್ತೆ ಅಪಘಾತದಲ್ಲಿ ಸತ್ತವರ ಸಂಖ್ಯೆ 13ಕ್ಕೆ ಏರಿಕೆ

ಧಾರವಾಡ ಸಮೀಪದ ತಡಸಿನಕೊಪ್ಪ ಕ್ರಾಸ್ ಹತ್ತಿರ ಇವತ್ತು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.ಮೃತಪಟ್ಟವರೆಲ್ಲರೂ ದಾವಣಗೆರೆ ಜಿಲ್ಲೆಯವರು ಎಂದು ಗೊತ್ತಾಗಿದೆ.

ದಾವಣಗೆರೆಯಿಂದ ಇವರು ಸಂಕ್ರಾಂತಿ ಹಬ್ಬದ ಅಂಗವಾಗಿ ಟಿಟಿ ಬಸ್ ಮೂಲಕ ಪಣಜಿ ಕಡೆ ಹೊರಟಿದ್ದರು. ಈ ವೇಳೆ ತಡಸಿನಕೊಪ್ಪ ಕ್ರಾಸ್ ಬಳಿ ಟಿಟಿ ಬಸ್ ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.

ಇದರಲ್ಲಿ ದಾವಣಗೆರೆಯ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ರವಿಕುಮಾರ ಅವರ ಪತ್ನಿ ಪ್ರೀತಿ ರವಿಕುಮಾರ (50) ಅವರು ಅಸುನೀಗಿದ್ದಾರೆ. ಪ್ರೀತಿ ಅವರು ಕಳೆದ ಬಾರಿ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಗೊತ್ತಾಗಿದೆ. ಪ್ರೀತಿ ಅವರು ತಮ್ಮ ಬಾಲ್ಯದ ಗೆಳತಿಯರೊಂದಿಗೆ ಗೋವಾದ ಪಣಜಿಗೆ ಪ್ರವಾಸಕ್ಕೆ ಹೊರಟಿದ್ದರು.

ಈ ಅಪಘಾತದಲ್ಲಿ ಪ್ರೀತಿ ಅವರ ಸ್ನೇಹಿತೆಯರಾದ ಪೂರ್ಣಿಮಾ, ಪ್ರವೀಣಾ, ಮಾನಸಿ, ಪರಂಜ್ಯೋತಿ, ರಾಜೇಶ್ವರಿ ಶಿವಕುಮಾರ, ಶಕುಂತಲಾ, ಉಷಾ, ವೇದಾ, ನಿರ್ಮಲಾ, ರಜಿನಿ ಶ್ರೀನಿವಾಸ ಅವರು ದುರ್ಮರಣ ಹೊಂದಿದ್ದಾರೆ. ಇದರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನುಳಿದವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಒಟ್ಟು 20 ಜನ ಟಿಟಿ ಬಸ್ ನಲ್ಲಿ ಪಣಜಿ ಕಡೆಗೆ ಹೊರಟಿದ್ದರು. ಇನ್ನುಳಿದವರ ಸ್ಥಿತಿಯೂ ಚಿಂತಾಜನಕವಾಗಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರು ಟ್ರಿಪ್ ಗೆ ಹೋಗುವಾಗ ಟಿಟಿ ಬಸ್ ನಲ್ಲೇ ಸೆಲ್ಫಿ ತೆಗೆದುಕೊಂಡು ಸ್ಟೇಟಸ್ ಹಾಕಿಕೊಂಡಿದ್ದರು.

Edited By : Manjunath H D
PublicNext

PublicNext

15/01/2021 01:40 pm

Cinque Terre

145.1 K

Cinque Terre

6

ಸಂಬಂಧಿತ ಸುದ್ದಿ