ಧಾರವಾಡ: ಬೆಳ್ಳಂಬೆಳಿಗ್ಗೆ ಜವರಾಯ ಅಟ್ಟಹಾಸ ತೋರಿದ್ದಾನೆ. ಮಿನಿ ಬಸ್ ನಲ್ಲಿ ನಿದ್ರೆಗೆ ಜಾರಿದ್ದ 9 ಜನ ನಿದ್ರಾ ಲೋಕದಲ್ಲೇ ಸ್ಮಶಾನ ಸೇರಿದ್ದಾರೆ.
ಧಾರವಾಡ ಸಮೀಪದ ತಡಸಿನಕೊಪ್ಪ ಕ್ರಾಸ್ ಬಳಿ ಟಿಟಿ ಬಸ್ ಹಾಗೂ ಎಂ ಸ್ಯಾಂಡ್ ತುಂಬಿದ ಟಿಪ್ಪರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ಭೀಕರ ಅಪಘಾತದಲ್ಲಿ ಒಟ್ಟು 9 ಜನ ಅಸುನೀಗಿದ್ದಾರೆ. ಇನ್ನೂ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಟಿಟಿ ಬಸ್ ನಲ್ಲಿದ್ದವರು ದಾವಣಗೆರೆಯಿಂದ ಪಣಜಿ ಕಡೆಗೆ ಹೊರಟಿದ್ದರು. ಸಂಕ್ರಾಂತಿಗೆಂದು ಈ ಬಸ್ ಟೂರ್ ಗೆ ಹೊರಟಿತ್ತು. ಈ ಬಸ್ ಚಾಲಕನನ್ನು ಹೊರತುಪಡಿಸಿ ಈ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಮಹಿಳೆಯರೇ ಆಗಿದ್ದಾರೆ.
ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೃಷ್ಣಕಾಂತ ಭೇಟಿ ನೀಡಿದ್ದಾರೆ.
PublicNext
15/01/2021 10:12 am