ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಯುವ ಮುನ್ನ ಸಚಿವರ ಪತ್ನಿಗೆ ಉಡಿ ತುಂಬಿದ್ದರು...!

ಯಲ್ಲಾಪುರ: ಕೇಂದ್ರ ಸಚಿವ ಶ್ರೀಪಾಸ್ ನಾಯಕ್ ಅವರ ಪತ್ನಿಯ ಅಕಾಲಿಕ ಸಾವಿಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರಕ್ಕೆ ಭಾನುವಾರ ರಾತ್ರಿ 12 ಗಂಟೆಯ ಸುಮಾರಿಗೆ ಆಗಮಿಸಿದ ಕೇಂದ್ರ ಸಚಿವ ಶ್ರೀಪಾದ ನಾಯಕ್ ಹಾಗೂ ಕುಟುಂಬ ಅಲ್ಲಿ ರಾತ್ರಿ ತಂಗಿದ್ದರು. ಸೋಮವಾರ ಬೆಳಿಗ್ಗೆ ತಾಲ್ಲೂಕಿನ ಚಂದಗುಳಿ ಗಂಟೆ ಗಣಪತಿ ದೇವಸ್ಥಾನಕ್ಕೆ ತೆರಳಿ ಗಣಹವನದಲ್ಲಿ ಪಾಲ್ಗೊಂಡಿದ್ದರು.

ಗಂಟೆ ಗಣಪತಿ ದರ್ಶನ ಮಾಡಿಕೊಂಡು ನಂತರ ಸಮೀಪದ ದೇಹಳ್ಳಿ ಬಳಿಯ ಕೂಡಿಗೆಯ ವೈದಿಕರೊಬ್ಬರ ಮನೆಯಲ್ಲಿ ಚಂಡಿಕಾ ಹವನ ಪೂರೈಸಿ ಅಲ್ಲಿಯೇ ಊಟ ಮಾಡಿದ್ದರು. ಸಂಜೆ 4.45ಕ್ಕೆ ಅಲ್ಲಿಂದ ಹೊರಟು 5.10ಕ್ಕೆ ಬಿಕ್ಕು ಗುಡಿಗಾರ ಕಲಾ ಕೇಂದ್ರಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು.

ನಂತರ ಗ್ರಾಮ ದೇವಿ ದೇವಸ್ಥಾನ ಹಾಗೂ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರದಲ್ಲಿ ಸ್ನೇಹಿತ ಬಿಕ್ಕು ಗುಡಿಗಾರ ಕಲಾ ಕೇಂದ್ರದ ಸಂತೋಷ ಗುಡಿಗಾರ, ಅರುಣ ಗುಡಿಗಾರ ಅವರ ಮನೆ ಭೇಟಿ ನೀಡಿ 7 ಗಂಟೆಗೆ ವಾಪಸ್ ಗೋಕರ್ಣಕ್ಕೆ ಹೊರಟಿದ್ದರು. ಸಚಿವರ ಪತ್ನಿ ವಿಜಯಾ ಅವರಿಗೆ ಸಂತೋಷ ಗುಡಿಗಾರ ಕುಟುಂಬದವರು ಉಡಿ ತುಂಬಿ ಬೀಳ್ಕೊಟ್ಟಿದ್ದರು.

ನಂತರ ಮಾರ್ಗಮಧ್ಯದಲ್ಲಿ ನಡೆದ ಅಪಘಾತದಲ್ಲಿ ವಿಜಯಾ ಶ್ರೀಪಾದ್ ಮೃತಪಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

12/01/2021 08:23 am

Cinque Terre

105.27 K

Cinque Terre

5