ಉತ್ತರ ಪ್ರದೇಶ: ಮಹಿಳೆಯೊಬ್ಬರು ಸಾವಿನ ದವಡೆಯಿಂದ ಬಚಾವ್ ಆಗಿ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಶಿಕೋಹಾಬಾದ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ತನ್ನ ಲಗೇಜ್ ಗಳನ್ನು ಹಿಡಿದುಕೊಂಡು ಫೂಟ್ ಬ್ರಿಡ್ಜ್ ನಲ್ಲಿ ನಡೆದುಕೊಂಡು ಬರುವ ಬದಲು, ರೈಲ್ವೆ ಹಳಿ ದಾಟಲು ಮುಂದಾಗಿದ್ದಾರೆ.
ನಂತರ ಪ್ಲ್ಯಾಟ್ ಫಾರಂ ಮೇಲೆ ಹತ್ತಲು ಕಷ್ಟಪಡುವ ಈ ಮಹಿಳೆ ಮೊದಲು ತನ್ನ ಬ್ಯಾಗ್ ನ್ನು ಪ್ಲ್ಯಾಟ್ ಫಾರಂನ ಮೇಲೆ ಇಟ್ಟು ತಾವು ಹತ್ತಲು ಯತ್ನಿಸುತ್ತಾರೆ. ಆದರೆ ಅತ್ತ ಕಡೆಯಿಂದ ವೇಗವಾಗಿ ರೈಲು ಬರುತ್ತಿರುವುದನ್ನು ಮಹಿಳೆ ಗಮನಿಸಿಲ್ಲ.
ಇದನ್ನು ನೋಡಿದ ರೈಲ್ವೆ ಸಿಬ್ಬಂದಿ, ತಕ್ಷಣ ಮಹಿಳೆಯನ್ನು ಮೇಲಕ್ಕೆತ್ತುತ್ತಾರೆ. ಆದರೆ ಮಹಿಳೆ ಮತ್ತೆ ಸಾವಿನ ದವಡೆಗೆ ಹೋಗುತ್ತಾರೆ. ತನ್ನ ಬ್ಯಾಗ್ ಪಡೆದುಕೊಂಡ ಬಳಿಕ, ತಾವು ಇಟ್ಟ ನೀರಿನ ಬಾಟಲು ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಇನ್ನು ಮಹಿಳೆ ಬಾಟಲಗಾಗಿ ಬೆಂಡಾಗುತ್ತಿದ್ದಂತೆ ಕೂದಲೆಳೆ ಅಂತರದಲ್ಲಿ ರೈಲು ಪಾಸಾಗುವುದನ್ನು ಸಿಸಿಟಿವಿ ವಿಡಿಯೋದಲ್ಲಿ ಗಮನಿಸಬಹುದು. ಮಹಿಳೆಯ ಈ ದುಸಾಹಸ ನೋಡಿದ ನೆಟ್ಟಿಗರು ದಂಗಾಗಿತ್ತಾರೆ. ಕಾಪಾಡಿದವರಿಗೂ ಕಿಮ್ಮತ್ತಿಲ್ಲದಾಗುತ್ತಿತ್ತಲ್ಲ ಎಂದು ಮಹಿಳೆ ನಡೆ ಖಂಡಿಸಿದ್ದಾರೆ.
PublicNext
11/09/2022 05:13 pm