ಸಾವಿನ ದವಡೆಯಿಂದ ಪಾರಾಗಿ ಬರೋದು ಅಂತಾರಲ್ಲ. ಅದಕ್ಕೆ ಬೆಸ್ಟ್ ಉದಾಹರಣೆ ಇಲ್ಲಿದೆ.
ಸೈಕಲ್ ಓಡಿಸಿಕೊಂಡು ಸೀದಾ ರಸ್ತೆಗೆ ನುಗ್ಗಿದ ಬಾಲಕ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಅದರ ಹಿಂದೆ ಕ್ಷಣ ಮಾತ್ರದಲ್ಲಿ ಬಂದ ಬಸ್ ಇನ್ನೇನು ಡಿಕ್ಕಿ ಹೊಡೆಯಿತು ಎಂಬಷ್ಟರಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ತಲಿಪರಂಬ ಸಮೀಪದ ಚೋರುಕಲ ಎಂಬಲ್ಲಿ ನಡೆದಿದ್ದು ಎಂಬ ಮಾಹಿತಿ ಇದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ. ಮತ್ತು ರಸ್ತೆ ಮೇಲಿನ ಅವಸರಗೇಡಿಗಳಿಗೆ ಒಂದೊಳ್ಳೆ ಪಾಠ ಹೇಳಿದೆ.
PublicNext
24/03/2022 11:44 am