ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೋಟೋಗೆ ಪೋಸ್ ಕೊಡಲು ಯದ್ವಾತದ್ವಾ ಬೈಕ್ ಚಲಾಯಿಸಿದ ಯುವಕರು : ವಿಡಿಯೋ ವೈರಲ್

ಅವರೆಲ್ಲಾ ಖುಷಿಯಿಂದ ಬೈಕ್ ಏರಿದ ಸ್ನೇಹಿತರು ಒಂದು ಬೈಕ್ ಮೇಲೆ ಇಬ್ಬರಂತೆ ಹತ್ತಾರು ಬೈಕ್ ಗಳಲ್ಲಿ ತಮ್ಮ ಜಾಲಿ ಜರ್ನಿ ಆರಂಭಿಸಿದ ಯುವಕರ ಪಡೆ ಮುಂದೆ ಅಪಘಾತವೊಂದನ್ನು ಮೈಮೇಲೆ ಎಳೆದುಕೊಂಡಿದೆ.

ಆ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಗಮನಿಸುವಂತೆ ಯುವಕರು ಫುಲ್ ಜೋಶ್ ನಲ್ಲಿ ಬೈಕ್ ರೈಡ್ ಮಾಡುತ್ತಿರುತ್ತಾರೆ. ಹಿಂದೆ ಬರುತ್ತಿರುವ ಹತ್ತಾರು ಬೈಕ್ ಗಳನ್ನು ವಿಡಿಯೋ ಮಾಡಲು ಮುಂದೊಂದು ಬೈಕ್ ಹೋಗಿರುತ್ತದೆ.

ಮುಂದಿನ ಬೈಕ್ ನವರು ವಿಡಿಯೋ ಮಾಡುತ್ತಿದ್ದಾರೆ. ಒಳ್ಳೆಯ ಪೋಸ್ ಕೊಡುವ ಉತ್ಸಾಹದಲ್ಲಿ ಯುವಕರು ಇದಕ್ಕಿಂದಂತೆ ಬೈಕ್ ಸ್ಟಂಟ್ ಮಾಡಲು ಮುಂದಾಗುತ್ತಾರೆ.

ಈ ವೇಳೆ ಒಂದು ಬೈಕ್ ನ ಯುವಕರು ಬ್ಯಾಲನ್ಸ್ ತಪ್ಪಿ ಕೆಳಗೆ ಬೀಳುತ್ತಾರೆ. ಇವರು ಕೆಳಗೆ ಬೀಳುತ್ತಿದ್ದಂತೆ ಎಲ್ಲರೂ ಒಂದು ಕ್ಷಣ ದಂದಾಗಿದ್ದಾರೆ.

ಫ್ರೆಂಡ್ಸ್ ಜೊತೆ ಮೋಜು ಮಸ್ತಿ ಮಾಡುವ ಮುನ್ನ ತುಸು ಜಾಗೃತಿ ವಹಿಸಿ ಎಂಬುದು ನಮ್ಮ ಕಾಳಜಿ..ಇನ್ನು ವಿಡಿಯೋ ಎಲ್ಲಿಯದು ಮತ್ತು ಯಾವಾಗ ಆಗಿರುವ ಘಟನೆ ಎನ್ನುವ ಬಗ್ಗೆ ಮಾಹಿತಿ ದೊರೆತ್ತಿಲ್ಲ.

Edited By : Manjunath H D
PublicNext

PublicNext

07/09/2021 01:31 pm

Cinque Terre

149.36 K

Cinque Terre

17

ಸಂಬಂಧಿತ ಸುದ್ದಿ