ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಪೀಸ್‌ ಪೀಸ್‌- ಸವಾರ ಗ್ರೇಟ್‌ ಎಸ್ಕೇಪ್

ಕೊಂಚ ಯಾಮಾರಿದ್ರೂ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಅದರಲ್ಲೂ ರೈಲು ಹಳಿ ದಾಟುವಾಗ ತುಂಬಾ ಜಾಗೃತೆ ವಹಿಸುವುದು ಅಗತ್ಯ. ಇದಕ್ಕೆ ನಿದರ್ಶನ ಎಂಬಂತೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತದಲ್ಲಿ ಘಟನೆ ನಡೆದಿದ್ದು, ಆದರೆ ಯಾವಾಗ? ಯಾವ ಸ್ಥಳದಲ್ಲಿ? ಎಂಬುದು ಮಾತ್ರ ಬೆಳಕಿಗೆ ಬಂದಿಲ್ಲ. ರೈಲು​ ಬರುವ ವೇಳೆ ರಸ್ತೆ ಬದಿಯಲ್ಲಿರುವ ಎರಡು ಗೇಟುಗಳನ್ನು ಹಾಕಲಾಗುತ್ತದೆ. ಆದರೆ ರೈಲು ಹೋಗುವುದನ್ನು ಕಾಯದೆ ಗೇಟ್​ಗಳನ್ನು ದಾಟಿಕೊಂಡು ಹೋಗುವವರು ಅನೇಕರು. ಅದರಂತೆ ಈ ದೃಶ್ಯದಲ್ಲಿ ರೈಲು ಬರುವ ಸಮಯದಲ್ಲಿ ಗೇಟುಗಳನ್ನು ದಾಟಿ ಬೈಕ್​ ಸವಾರನೊಬ್ಬ ರಸ್ತೆ ದಾಟಲು ಮುಂದಾಗುತ್ತಾನೆ. ಪುಣ್ಯಕ್ಕೆ ರೈಲು ಹತ್ತಿರದಲ್ಲೇ ಇದೆ ಎಂದು ತಿಳಿದು ಬೈಕ್​ ಅನ್ನು ಅಲ್ಲೇ ನಿಲ್ಲಿಸುತ್ತಾನೆ. ಆದರೆ ಬೈಕ್​ ನಿಲ್ಲಿಸುವ ಸಮಯಕ್ಕೆ ಬೈಕ್​ ಕೊಂಚ ಮುಂದಕ್ಕೆ ಚಲಿಸಿ ಅಡ್ಡ ಬೀಳುತ್ತದೆ. ಬೈಕ್​ ಬೀಳುತ್ತಿದ್ದಂತೆ ಚಲಿಸುವ ರೈಲಿಗೆ ತಾಕಿ ಬೈಕ್​ ನುಚ್ಚು ನೂರಾಗಿ ಎಸೆಯಲ್ಪಡುತ್ತದೆ. ಆದರೆ ಯುವಕ ಮಾತ್ರ ಬೈಕ್​ ಬಿದ್ದಂತೆ ಹಿಂದೆ ಸರಿದು ಬದುಕುಳಿದಿದ್ದಾನೆ.

Edited By : Nagesh Gaonkar
PublicNext

PublicNext

31/01/2021 03:46 pm

Cinque Terre

109.66 K

Cinque Terre

10

ಸಂಬಂಧಿತ ಸುದ್ದಿ