ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಂಗಿನ ಕಾಯಿ ಪ್ರಸಾದ ಪಡೆಯೋವಾಗ ಕಾಲ್ತುಳಿತ-17 ಜನ ಭಕ್ತರಿಗೆ ಗಾಯ !

ಜೈಪುರ್: ಭಕ್ತರಿಗೆ ತೆಂಗಿನ ಕಾಯಿ ಹಂಚುವ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 17 ಜನ ಗಾಯಗೊಂಡ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಸಾಗರ ಜಿಲ್ಲೆಯ ಬಿನಾ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಹಿಂದೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಇದೇ ವೇಳೆ ತೆಂಗಿನ ಕಾಯಿ ಹಂಚಲಾಗಿತ್ತು.

ತೆಂಗಿನ ಕಾಯಿ ಪಡೆಯುವಲ್ಲಿ ನೂಕು ನುಗ್ಗಲು ಉಂಟಾಗಿದೆ. ಇದರ ಪರಿಣಾಮ ಸಾಲಿನಲ್ಲಿ ನಿಂತ ಜನ ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಇದರಿಂದ 17 ಜನ ಗಾಯಗೊಂಡಿದ್ದಾರೆ. ಮೂವರ ಮೂಳೆ ಮುರಿದು ಹೋಗಿವೆ. ಸದ್ಯ ಇವರನ್ನ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By :
PublicNext

PublicNext

16/05/2022 01:54 pm

Cinque Terre

94.69 K

Cinque Terre

2