ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸರ್ಕಾರಿ ಬಸ್ ಹಾಗೂ ಕಾರ್ ಡಿಕ್ಕಿ; ಅಂತ್ಯಕ್ರಿಯೆ ಮುಗಿಸಿ‌ ಬರುತ್ತಿದ್ದ ಇಬ್ಬರ ಸಾವು

ಗದಗ: ಕಾರ್ ಹಾಗೂ ಸರ್ಕಾರಿ ಬಸ್ ನಡುವೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿ, ಇಬ್ಬರಿಗೆ ಗಂಭೀರ ಗಾಯಗಳಾಗುರೋ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕಲಕೇರಿ ಬಳಿ ನಡೆದಿದೆ. ಬಸವರಡ್ಡಿ(೫೦),ಹಾಗೂ ಹನುಮಂತಗೌಡ (೪೮) ಮೃತ ದುರ್ದೈವಿಗಳಾಗಿದ್ದು, ನವೀನ್ ಹಾಗೂ ಮಂಜುನಾಥ ಅನ್ನೋರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಸರ್ಕಾರಿ ಬಸ್ ಗದಗ ನಗರದಿಂದ ನರಗುಂದ ಕಡೆಗೆ ಹೊರಟ್ಟಿದ್ದು, ಬಾಗಲಕೋಟೆ ಯಿಂದ ನವಲಗುಂದಕ್ಕೆ ಬರುತ್ತಿದ್ದ ಕಾರ್ ಡಿಕ್ಕಿಯಾಗಿದೆ. ಬಾಗಲಕೋಟೆಯಲ್ಲಿ‌ ಸಂಭಂಧಿಕರೊಬ್ಬರ ಅಂತ್ಯಕ್ರಿಯೆಗೆ ತೆರಳಿ, ಮರಳಿ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರ್ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಸ್ಥಳಕ್ಕೆ ನರಗುಂದ ಡಿವೈಎಸ್ಪಿ ವೈ.ಎಸ್ ಏಗನಗೌಡ್ರ ಹಾಗೂ ಸಿಪಿಐ ಮಲ್ಲಯ್ಯ ಮಠಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

02/09/2022 06:01 pm

Cinque Terre

94.35 K

Cinque Terre

2