ತಿರುವನಂತಪುರ: ವಾಹನವನ್ನು ಓವರ್ ಟೇಕ್ ಮಾಡಲು ಯತ್ನಿಸಿದ್ದ ವೇಳೆ ಅಪಘಾತ ಸಂಭವಿಸಿ ನವದಂಪತಿ ಸಾವನ್ನಪ್ಪಿದ ಘಟನೆ ಕೇರಳದ ಮಲ್ಲಪುರಂನಲ್ಲಿ ನಡೆದಿದೆ.
ಪಶ್ಚಿಮ ಕನ್ನಮಂಗಳದ ನಿವಾಸಿ ಸಲಾಹುದ್ದೀನ್ (25) ಹಾಗೂ ಫಾತಿಮಾ ಜಮುನಾ (19) ಅಪಘಾತದಲ್ಲಿ ಮೃತಪಟ್ಟ ದಂಪತಿ. ಈ ಜೋಡಿ ಶನಿವಾರ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಸಂಬಂಧಿಕರ ಮನೆಯಿಂದ ಹಿಂದಿರುಗುತ್ತಿದ್ದರು. ಮಾರ್ಗಮಧ್ಯೆ ಚೆಲೆಂಬ್ರ ಪಂಚಾಯ್ತಿ ಬಳಿ ಸಲಾಹುದ್ದೀನ್ ವಾಹನವೊಂದನ್ನು ಓವರ ಟೇಕ್ ಮಾಡಲಯ ಯತ್ನಿಸಿದ್ದಾರೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಸಲಾಹುದ್ದೀನ್ ಮತ್ತು ಫಾತಿಮಾ ರಸ್ತೆಯ ಮೇಲೆ ಬಿದ್ದಿದ್ದಾರೆ.
ಎದುರಿನಿಂದ ಬರುತ್ತಿದ್ದ ಲಾರಿ ಇಬ್ಬರ ಮೇಲೆ ಹರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದ ಸಲಾಹುದ್ದೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ಫಾತಿಮಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಕುರಿತು ತನ್ಹಿಪಾಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
15/11/2020 11:19 pm