ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಕ್ಕೆ ಜೀಪ್ ಡಿಕ್ಕಿ: ನೈಟ್ ರೌಂಡ್ಸ್ ಹೋಗಿದ್ದ ಪೊಲೀಸರು ಸಾವು

ಮೈಸೂರು- ರಾತ್ರಿ ಗಸ್ತು ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ಪೊಲೀಸರಿದ್ದ ಜೀಪು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಜೀಪ್ ನಲ್ಲಿದ್ದ ಇಬ್ಬರು ಪೊಲೀಸರು ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಕೆಆರ್ ನಗರ ತಾಲೂಕಿನಲ್ಲಿ ನಡೆದಿದೆ‌.

ಕೆ ಆರ್ ನಗರ ಪೊಲೀಸ್ ಠಾಣೆಯ ಎ ಎಸ್ ಐ ಹಾಗೂ ಗುಪ್ತವಾರ್ತೆ ಎಸ್ ಬಿ ಆಗಿದ್ದ ಶಾಂತಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ ಈ ಇಬ್ಬರು ನೈಟ್ ರೌಂಡ್ಸ್ ಕರ್ತವ್ಯಕ್ಕೆ ತೆರಳಿದ್ದರು. ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

Edited By : Nagaraj Tulugeri
PublicNext

PublicNext

12/11/2020 10:10 am

Cinque Terre

65.19 K

Cinque Terre

4