ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಮ್ಮನಿರದೇ ಗೂಳಿಯಿಂದ ಗುದ್ದಿಸಿಕೊಂಡ ತಾತ

ಸುಮ್ಮನಿರಲಾರದೇ ಇರುವೆ ಬಿಟ್ಕೊಂಡ್ರು ಅಂತಾರಲ್ಲ. ಹಾಗಾಯ್ತು ಈ ಕತೆ.! ಅದು ಮೊದಲೇ ಹೇಳಿ ಕೇಳಿ ಕೊಬ್ಬಿದ ಗೂಳಿ. ತನ್ನ ಪಾಡಿಗೆ ತಾನು ಸುಮ್ಮನೇ ನಿಂತಿತ್ತು. ಅಲ್ಲಿಗೆ ಬಂದ ಈ ತಾತ ಅದನ್ನ ಬೆದರಿಸಲು ಪ್ರಯತ್ನಿಸಿ ಬಡಿಗೆಯಿಂದ ಬಡಿದಿದ್ದಾನೆ. ಆಗ ಸಹನೆ ಕಳೆದುಕೊಂಡ ಆ ಗೂಳಿ ತನ್ನನ್ನು ಹೊಡೆದ ತಾತನನ್ನು ಕೊಂಬಿನಿಂದ ಎತ್ತಿ ಬಿಸಾಕಿದೆ. ಹೀಗೆ ಪ್ರತೀಕಾರ ತೀರಿಸಿಕೊಂಡ ನಂತರ ಸುಮ್ಮನೇ ತನ್ನ ಪಾಡಿಗೆ ತಾನು ಮುಂದೆ ಸಾಗಿದೆ. ಆದ್ರೆ ಅದೃಷ್ಟವಶಾತ್ ಇದರಿಂದ ತಾತನ ಜೀವಕ್ಕೆ ಹಾನಿಯಾಗಿಲ್ಲ.

ಈ ಮೂಲಕ ಗೊತ್ತಾಗಿದ್ದೇನಂದ್ರೆ ಯಾವುದೇ ಪ್ರಾಣಿ ಆಗಲಿ. ಅದರ ಪಾಡಿಗೆ ಅದನ್ನ ಸುಮ್ಮನೇ ಬಿಟ್ಟುಬಿಡಬೇಕು. ಹೀಗೆ ಏನೇನೋ ಕೀಟಲೆ ಮಾಡೋಕೆ ಹೋದ್ರೆ ಈ ರೀತಿ ಅನಾಹುತ ಆಗುತ್ತೆ. ಗೂಳಿ ಪರಾಕ್ರಮಿಯಲ್ಲ. ತನಗೆ ಅಪಾಯ ಬಂದರೆ ಅದು ಸುಮ್ಮನಿರೋಲ್ಲ. ಅಲ್ವಾ?

Edited By : Nagesh Gaonkar
PublicNext

PublicNext

11/11/2020 12:40 pm

Cinque Terre

100.31 K

Cinque Terre

12

ಸಂಬಂಧಿತ ಸುದ್ದಿ