ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀ-ವೆಡ್ಡಿಂಗ್ ಮುನ್ನ ಎಚ್ಚರ : ಮದುವೆಗೂ ಮುನ್ನ ಮಸಣ ಸೇರಿದ ನವಜೋಡಿ

ಮೈಸೂರು : ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸೋಕೆ ಹೋಗಿ ಹಸೆಮಣೆ ಏರಬೇಕಿದ್ದ ಜೋಡಿ ಸಾವನಪ್ಪಿರುವ ಘಟನೆ

ತಿ.ನರಸೀಪುರ ತಾಲೂಕಿನ ಮುಡುಕುತೊರೆ ಬಳಿ ನಡೆದಿದೆ.

ನವೆಂಬರ್ 22ರಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಚಂದ್ರು(28) ಮತ್ತು ಶಶಿಕಲಾ (20) ಮೃತ ದುರ್ದೈವಿಗಳು.

ಇತ್ತೀಚ್ಚೆಗೆ ಪ್ರೀ ವೆಂಡಿಂಗ್ ಎಂಬುದು ಒಂದು ಫ್ಯಾಶನ್ ಆಗಿದೆ. ಇವರು ಕೂಡಾ ಕಾವೇರಿ ನದಿ ಮಧ್ಯೆ ತೆಪ್ಪದಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡುತ್ತಿದ್ದರು.

ಆದರೆ ತೆಪ್ಪ ಮಗುಚಿದ ಪರಿಣಾಮ ಇಬ್ಬರೂ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.

ಎರಡು ತೆಪ್ಪದಲ್ಲಿ ಒಟ್ಟು ಐವರು ನದಿ ಮಧ್ಯೆ ತೆರಳಿದ್ದರು. ಚಂದ್ರು-ಶಶಿಕಲಾ ಒಂದು ತೆಪ್ಪದಲ್ಲಿದ್ದರೆ, ಫೋಟೋಗ್ರಾಫರ್ ಮತ್ತು ಸಂಬಂಧಿಕರಿಗಾಗಿ ಇನ್ನೊಂದು ತೆಪ್ಪ ಸಿದ್ಧಪಡಿಸಲಾಗಿತ್ತು.

ಹರಿಯುತ್ತಿರುವ ನೀರಿನ ಮಧ್ಯೆ ತೆಪ್ಪದಲ್ಲಿ ನಿಂತು ಫೋಸ್ ಕೊಟ್ಟಿದ್ದರು. ಆದರೆ ಆ ತೆಪ್ಪ ಮಗುಚಿ ಇಬ್ಬರೂ ಮೃತಪಟ್ಟಿದ್ದಾರೆ.

ಇವರಿಬ್ಬರ ಶವವನ್ನೂ ನೀರಿನಿಂದ ಹೊರತೆಗೆಯಲಾಗಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

09/11/2020 07:11 pm

Cinque Terre

142.34 K

Cinque Terre

21

ಸಂಬಂಧಿತ ಸುದ್ದಿ