ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆ ಮಾಡಿದ ಅವಾಂತರ : ನೀರಿನಲ್ಲಿ ಮುಳುಗಿ ಮೂವರ ಬಾಲಕರ ದಾರುಣ ಸಾವು

ಹಾವೇರಿ : ರಣ ಮಳೆ ಇನ್ನೂ ಅದೆಷ್ಟು ಅವಾಂತರಗಳನ್ನು ಸೃಷ್ಟಿಸುತ್ತದೆಯೂ ಗೋತ್ತಿಲ್ಲ.

ಸದ್ಯ ಹಾವೇರಿಯಲ್ಲಿ ನಡೆದ ಘಟನೆ ನಿಜಕ್ಕೂ ಮೈ ಜುಮ್ಮ ಎನ್ನುವಂತಿದೆ.

ಶಾಲಾ ಕೊಠಡಿ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಮೂವರು ಬಾಲಕರ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಎರಡನೇ ನಂಬರ್ ಶಾಲೆಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಾಲಾ ಕೊಠಡಿ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಗಳು ತುಂಬಿದ್ದವು.

ಈ ಗುಂಡಿಗೆ ಬಿದ್ದು ಬಾಲಕರಾದ ಅಜ್ಮಲ್ (8) ಅಕ್ಮಲ್ (9) ಮತ್ತು ಜಾಫರ್ (12) ಮೃತಪಟ್ಟಿದ್ದಾರೆ.

ಈ ಮೂವರ ಮಕ್ಕಳು ಶಾಲೆಯ ಮೈದಾನದಲ್ಲಿ ಆಡಲು ಹೋಗಿದ್ದಾರೆ. ಮಳೆಗೆ ಗುಂಡಿ ತುಂಬಿದ್ದು ಮಕ್ಕಳಿಗೆ ಕಾಣಿಸಿಲ್ಲ.

ಆಡುತ್ತಲೇ ಮಕ್ಕಳು 10 ಅಡಿ ಆಳದ ಗುಂಡಿಗೆ ಬಿದ್ದಿದ್ದಾರೆ. ಮಕ್ಕಳ ಬಿದ್ದ ಸಮಯದಲ್ಲಿ ಯಾರೂ ಸ್ಥಳದಲ್ಲಿ ಇಲ್ಲದ ಕಾರಣ ಮಕ್ಕಳನ್ನು ಬದುಕಿಸಲು ಆಗಿಲ್ಲ.

ಹೀಗಾಗಿ ಮೂವರು ಬಾಲಕರು ಮೃತಪಟ್ಟಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.

ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

24/10/2020 08:33 pm

Cinque Terre

134.03 K

Cinque Terre

7

ಸಂಬಂಧಿತ ಸುದ್ದಿ