ಬೆಂಗಳೂರು : ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೃಷ್ಣ ನಾಡಿಗ್ ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಶನಿವಾರ ಧಾರಾವಾಹಿ ಶೂಟಿಂಗ್ ಸೆಟ್ ನಲ್ಲಿ ಹೃದಯದ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯವರೆಗೆ ಗಿರಿನಗರದ ಸೀತಾ ಸರ್ಕಲ್ ಬಳಿಯ ಕೃಷ್ಣಮೂರ್ತಿ ನಾಡಿಗ ಅವರ ನಿವಾಸದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ, ಚಾಮರಾಜನಗರ ಚಿತಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಚಂದನವನದಲ್ಲಿ ಗೋಸ್ಟ್ ರೈಟರ್ ಆಗಿ 60ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕಥೆ ಬರೆದ ಹಿರಿಮೆಯ ನಾಡಿಗ್, ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಕನ್ನಡ ಹಲವು ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದ ನಾಡಿಗ್ ಚಿತ್ರರಂಗ ಕಿರುತೆರೆಯ ಬರಹಗಾರರು, ನಟರಾಗಿ ಗುರುತಿಸಿಕೊಂಡು ಎಲ್ಲರ ಮನಗೆದ್ದಿದ್ದರು.
PublicNext
18/10/2020 08:10 am