ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಗಧಗಿಸಿದ ಕಾರು : ಎನ್ ಸಿಪಿ ನಾಯಕ ಸಜೀವ ದಹನ

ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಎನ್ ಸಿಪಿ ಮುಖಂಡ ಸಂಜಯ್ ಶಿಂಧೆ ಸಜೀವ ದಹನಗೊಂಡ ದುರ್ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ.

ಕಾರು ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಶಾರ್ಟ್ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಧಗಧಗನೆ ಉರಿದ ಕಾರಿನೊಳಗಿದ್ದ ಸಂಜಯ್ ಶಿಂಧೆ ಭಸ್ಮವಾಗಿ ಹೋಗಿದ್ದಾರೆ.

ಪ್ರಮುಖ ವೈನ್ ಉತ್ಪಾದನಾ ಕೇಂದ್ರವಾಗಿರುವ ನಾಸಿಕ್ನಲ್ಲಿ ಶಿಂಧೆ ಕೂಡ ದ್ರಾಕ್ಷಿ ಹಣ್ಣಿನ ಬೆಳೆಗಾರರು. ತಮ್ಮ ಹಣ್ಣಿನ ತೋಟಕ್ಕೆ ಕೀಟನಾಶಕಗಳನ್ನು ಖರೀದಿಸಲು ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ಕಡ್ವಾ ನದಿಯ ಸೇತುವೆಯ ಮೇಲೆ ಕಾರಿಗೆ ಬೆಂಕಿ ಹೊತ್ತಿದೆ. ಆದರೆ ದುರಂತವೆಂದರೆ ಕಾರಿನ ಬಾಗಿಲುಗಳೂ ಜಾಮ್ ಆಗಿದ್ದವು.

ಸ್ಥಳೀಯರು ಕೂಡಲೇ ಆಗಮಿಸಿ, ಅದರೊಳಗೆ ಇದ್ದವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲಷ್ಟೇ ಸಾಧ್ಯವಾಯಿತು. ಕಾರಿನಲ್ಲಿದ್ದವರನ್ನು ಉಳಿಸಲಾಗಲಿಲ್ಲ.

Edited By : Nirmala Aralikatti
PublicNext

PublicNext

14/10/2020 10:46 pm

Cinque Terre

69.5 K

Cinque Terre

2

ಸಂಬಂಧಿತ ಸುದ್ದಿ