ಬೆಂಗಳೂರು : ನಗರದ ಯಲಹಂಕ ಸಮೀಪದ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಅ.2ರ ನಸುಕಿಗೆ ಸಂಭವಿಸಿದ ಸ್ಫೋಟದಲ್ಲಿ 15 ಇಂಜಿನಿಯರ್ ಗಳು ಗಾಯಗೊಂಡಿದ್ದರು.
ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಇಂಜಿನಿಯರ್ ಗಳು ಸೋಮವಾರ ಮೃತಪಟ್ಟಿದ್ದಾರೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.
ಕಾರ್ಯಪಾಲಕ ಇಂಜಿನಿಯರ್ ( ಮೆಕ್ಯಾನಿಕಲ್) ಕೃಷ್ಣಭಟ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ( ಎಲೆಕ್ಟ್ರಿಕಲ್) ಮಂಜಪ್ಪ ಮೃತಪಟ್ಟ ದುರ್ದೈವಿಗಳು.
ಸತತ 11 ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿ ಕೊನೆಯುಸಿರೆಳೆದಿದ್ದಾರೆ.
PublicNext
12/10/2020 11:39 am