ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಸತ್ಕಾರ್ಯಕ್ಕೆ ಸಹಕಾರ ನೀಡುವ ಭಕ್ತರಿಗೆ ಹರಿ ಗುರುಗಳ ಕೃಪೆ-ಕಾಶೀ ಮಠಾಧೀಶ ಶ್ರೀ ಸಂಯಮಿಂದ್ರ ಸ್ವಾಮೀಜಿ

ಮುಲ್ಕಿ:ಉತ್ತಮ ಕಾರ್ಯಗಳಿಗೆ ಶ್ರೀದೇವರ ಆಶೀರ್ವಾದ ಹಾಗೂ ಸತ್ಕಾರ್ಯಕ್ಕೆ ಸಹಕಾರ ನೀಡುವ ಭಕ್ತರಿಗೆ ಹರಿ ಗುರುಗಳ ಕೃಪೆ ಇದೆ ಎಂದು ಶ್ರೀ ಕಾಶೀ ಮಠಾದೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಮುಲ್ಕಿ ಶ್ರೀ ವಿಜಯೀಂದ್ರ ಅಧ್ಯಯನ ಕೇಂದ್ರ ಮತ್ತು ಬೆಂಗಳೂರಿನ ತಾರಾ ಪ್ರಕಾಶನದ ಸಹಯೋಗದಲ್ಲಿ ದೇವಸ್ಥಾನದ ತಾಳೇಗರಿ ಗ್ರಂಥದಲ್ಲಿ ಲಭ್ಯವಾದ ಐದು ದೇವರ ವಿಶೇಷ ನಾಮಾವಳಿಯನ್ನು ಭಗವನ್ನಾಮಾವಳಿ ಸಂಗ್ರಹ ಪುಸ್ತಕ ರೂಪದಲ್ಲಿ ಬೆಂಗಳೂರಿನಲ್ಲಿ ಚಾತುರ್ಮಾಸ್ಯ ವೃತದಲ್ಲಿರುವ ಸ್ವಾಮೀಜಿ ಪುಸ್ತಕ ಬಿಡುಗಡೆ ಗೊಳಿಸಿದ ಬಳಿಕ ಆಶೀರ್ವಚಿಸಿದರು.

ಮುಲ್ಕಿ ಶ್ರೀ ವ್ಯಾಸ ಮಹರ್ಷಿ ವೇದಪಾಠ ಶಾಲೆಯ ಸಂಚಾಲಕ ಎಂ. ಪಾಂಡುರಂಗ ಭಟ್ ಮಾಹಿತಿ ನೀಡಿ, ಹಿರಿಯರ ಜೀವನಾನುಭವ ಹಾಗೂ ಸಂಶೋಧನೆಗಳನ್ನು ತಾಳೆಗರಿಯಲ್ಲಿ ಅಡಕಗೊಳಿಸಿರುವುದನ್ನು ಮೂಲಹಸ್ತ ಪ್ರತಿಯ ರೂಪದಲ್ಲಿ ಪ್ರಕಟಿಸಿ ಯುವ ಅಧ್ಯಯನಗಾರರಿಗೆಸಹಕರಿಸುವುದು ಮುಲ್ಕಿ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸ ಮಹರ್ಷಿ ವೇದಪಾಠ ಶಾಲೆಯ ಶ್ರೀ ವಿಜಯೀಂದ್ರ ಅಧ್ಯಯನ ಕೇಂದ್ರದ ಯೋಜನೆಯಾಗಿದೆ ಎಂದರು

ಅಮೇರಿಕಾ ದೇಶದ ರೋಷ್ಟರ್ ಯೂನಿವರ್ಸಿಟಿಯ ಪ್ರೊ.ಮುಕುಂದ್ ಮಾಹಿತಿ ನೀಡಿ, ನಮ್ಮ ದೇಶದ ಮೆಧಾವಿಗಳಿಂದ ಸಂಶೋಧನೆಗೊಂಡ ಆಕರಗಳು ತಾಳೆಗರಿಯ ಹಸ್ತಿ ಲಿಪಿಯಲ್ಲಿ ಅಡಕವಾಗಿದ್ದು ಅವುಗಳನ್ನು ವಿಶೇಷ ತಂತ್ರಜ್ಞಾನದ ಮೂಲಕ ವರ್ಗಾಯಿಸಿಕೊಂಡು ಯುವ ಸಂಶೋಧಕರಿಗೆ ದಾರಿ ದೀಪವಾಗಿಸುವ ಯೋಜನೆಯಡಿ ಪ್ರಥಮ ಹೆಜ್ಜೆಯಾಗಿದೆ ಎಂದರು.

ಸಹ ಅಧ್ಯಯನಗಾರ ಪ್ರೊ.ಅನಂತ ಪದ್ಮನಾಭ ಮಾತನಾಡಿ, ದೇವಳದಲ್ಲಿ ಲಭ್ಯವಾದ ತಾಳೆಗರಿ ಹಸ್ತಲಿಪಿಯಲ್ಲಿ ಶ್ರೀ ದೇವರ ವಿಶೇಷ ನಾಮಾವಳಿಗಳು ಲಭ್ಯವಾಗಿದ್ದು ಅವು ಬಹಳ ಭಿನ್ನ ಹಾಗೂ ಅಪೂರ್ವವಾಗಿದೆ. ಇವುಗಳನ್ನು ಪ್ರಕಟಿಸುವ ಮೂಲಕ ಯುವ ಅಧ್ಯಯನ ಕಾರರಿಗೆ ಸಹಕರಿಸುವ ಗುರಿ ಹೊಂದಲಾಗಿದೆ ಎಂದರು.

ಈ ಸಂದರ್ಭ ಶ್ರೀ ಕ್ಷೇತ್ರದ ಅರ್ಚಕವರ್ಗ, ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು

Edited By :
Puneethakrishna Sk

Puneethakrishna Sk

24/08/2023 09:03 pm

Cinque Terre

534

Cinque Terre

0